ನನ್ನೊಳಗಿನ ಒಳಮನಸಿನ
ಉತ್ಖನನಕ್ಕಿಳಿದ ನನಗೆ
"ನಾನು" ಎಂಬುದು ಮಾತ್ರ ಸಿಕ್ಕು,
ಬೇರೆಲ್ಲಾ ಮಣ್ಣಲ್ಲಿ ಮಣ್ಣಾಗಿ
ಶತಮಾನ ಕಳೆದಿದ್ದವೂ...
ಅಲ್ಲಿ ಯಾವ ದೇವರೂ ಹುಟ್ಟಿದ ದಾಖಲೆಯಾಗಲಿ,
ಅವನ ಮಂದಿರದ ಕುರುಹುಗಳಾಗಲಿ
ಸಿಗಲಿಲ್ಲ...
ಬದುಕಿನ ಹಾದಿಯಲ್ಲಿ
ವಿದಿಯ ಹಲವು ದಾಳಿಗಳಲ್ಲಿ
ಬದಲಾದ ಮನಸ್ಸು
"ನಾನು" ಎಂಬ ಮಹಲು ಕಟ್ಟಿ ಮಲಗಿರಲು
ನಾನೇಕೆ ದೇವ ಮಂದಿರ ಕಟ್ಟಲು
ಆ ಮಹಲು ಒಡೆಯಲಿ??!
"ನಾನು" ನಾನಗಿದ್ದೆ ಇತಿಹಾಸ
ಅದರ ಬೆನ್ನಟ್ಟಿದ್ದೆ ಒಂದು ಅಪಹಾಸ್ಯ.
ನಾನೇಳುವುದನ್ನು ಕೇಳು...
ಬದುಕು ಹುಟ್ಟಿನ ಮುನ್ನುಡಿಯಲ್ಲಿ
ಸಾವಿನ ಅಂತ್ಯವೂ ಬರೆದು
ನಿನ್ನ ಕೈಗಿಟ್ಟ ಖಾಲಿಪುಟಗಳ ಕಾದಂಬರಿ!?
ಪೂರ್ಣಗೊಳಿಸು ಬದುಕೆಂಬ ನಾಕು ದಿನದ
ಸಂತೆಯೊಳಗಿನ ನಾನಾ ಚಿಂತೆಯನ್ನು
ಕಂತೆ ಕಂತೆಯಾಗಿ ಬರೆದು..!?
ನಾನಾಗಿದ್ದ "ನಾನು" ನಮ್ಮವನು
ಎನ್ನುವಂತೆ ಬದುಕಿ
ಜನರೆದೆಯಲ್ಲಿ ತಣ್ಣಗೆ ಮಲಗಿಬಿಡು
ಸಾವಿನ ಕೊನೆ ಪುಟಕ್ಕೆ ಸರಿದು..!!!