Bheemu Kampli's Album: Wall Photos

Photo 7 of 48 in Wall Photos

*ಕಾಮನ ಬಿಲ್ಲು*

ಬಣ್ಣ ಬಣ್ಣಗಳ ಸಮ್ಮಿಲನಕೆ
ಏನೆಂದು ಹೆಸರಿಡಲಿ,
ಅಷ್ಟು ಎತ್ತರಕೆ ನೀನು ಬಿಲ್ಲು ಹರಡಿರಲು, ಏನೆಂದು ಕರೆಯಲಿ.?!

ಸೂರ್ಯನ ಪ್ರಭೆಗೆ ವರುಣನ ಸಿಂಚನಕೆ ಮೈತುಂಬಿ ಬಣ್ಣಗಳಿಂದ ಹರಡಿಕೊಂಡಿರಲು
ಏನೆಂದು ಕರೆಯಲಿ.?!

ರಾಮನ ಬಿಲ್ಲಿನ ಆಕಾರಕೆ
ಹೋಲಿಸಲೇ ಗಾಂಢೀವಿಯ
ಬಿಲ್ಲಿಗೇ.?
ಈ ನಿನ್ನ ಮೈದುಂಬಿದ ವರ್ಣ ಬಿಲ್ಲನು ಯಾವುದಕೆ ಹೋಲಿಸಲಿ.?

ಕಾಮನ ಬಿಲ್ಲೆನುವರು
ಕಾಮನು ಹೂಡಿದ ಬಿಲ್ಲೇ.?
ಯಾರು ನಿನಗೆ ಹೆಸರಿಟ್ಟರು.?
ಅಷ್ಟು ಬಣ್ಣಗಳನು ಮುಚ್ಚಿಟ್ಟುಕೊಂಡಿರುವೆ,

ವರುಣಾದಿತ್ಯರ ನರ್ತನಕೆ
ನವಿಲು ನಾಟ್ಯವಾಡುವ ಹಾಗೆ
ನೀನು ಬಣ್ಣಗಳನು ಹೊರ ಚೆಲ್ಲಿ
ಓಕುಳಿಯಾಡುವೆ
ಹೇಳು ನೀನು ಏನೆಂದು
ನಿನಗೆ ಹೆಸರಿಡಲಿ..?!!!